ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವದಲ್ಲಿ ಸೆಪ್ಟೆಂಬರ್ 26ರಂದು ಸಂಪೂರ್ಣ ವಂದೇ ಮಾತರಂ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರ್ದೇಶಿಸಿದ್ದಾರೆ. 3 ನಿಮಿಷ 10 ಸೆಕೆಂಡ್ ಅವಧಿಯ ಗೀತೆಯನ್ನು ಉದ್ಘಾಟನಾ ಹಂತದಲ್ಲಿ ಪ್ರಸ್ತುತಪಡಿಸಲು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರಿಗೆ ಸೂಚನೆ ನೀಡಲಾಗಿದೆ. ಈ ವಿಚಾರ ಕೇಂದ್ರ-ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ವಿಟಿಯು ಘಟಿಕೋತ್ಸವದಲ್ಲಿ ಪೂರ್ಣ ವಂದೇ ಮಾತರಂ ಕಡ್ಡಾಯ: ರಾಜ್ಯಪಾಲರ ನಿರ್ದೇಶನ
Source: Vishwavani