ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಜೋರಾದ ಡಿಜೆ ಸದ್ದಿನ ವೇಳೆ ತರಗತಿಯಲ್ಲಿದ್ದ 2ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ತಿವಾರಿ ಅಸ್ವಸ್ಥಳಾಗಿ ಕುಸಿದು ಮೃತಪಟ್ಟಿದ್ದಾಳೆ. ಶಾಲೆಯ ಬಳಿಯಿಂದ ಮೆರವಣಿಗೆ ಸಾಗಿದ್ದು, ತರಗತಿಯಲ್ಲಿ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಆಕೆಯ ಸಾವಿಗೆ ನಿಖರ ಕಾರಣ ದೃಢಪಟ್ಟಿಲ್ಲ; ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯ ವೈರಲ್ ಆಗಿದೆ.
ಡಿಜೆ ಸದ್ದಿನ ನಡುವೆ ತರಗತಿಯಲ್ಲಿ ಬಾಲಕಿ ಕುಸಿದು ಸಾವು
Source: Zee Kannada News