ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್, ರಾಜ್ಯದ ಬರಗಾಲ ಎದುರಿಸಲು ಗೃಹಲಕ್ಷ್ಮಿ ಯೋಜನೆಯನ್ನು ಒಂದು ವರ್ಷ ತಡೆಹಿಡಿದು, ಆ ಹಣವನ್ನು ನೀರಾವರಿ ಯೋಜನೆಗಳಿಗೆ ಬಳಸಬೇಕೆಂದು ಆಗ್ರಹಿಸಿದ್ದಾರೆ. ಬುಧವಾರ ವಿಧಾನ ಪರಿಷತ್ತಿನ ಚರ್ಚೆಯಲ್ಲಿ ಸ್ವಪಕ್ಷದ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ ಅವರು, ಮೇಕೆದಾಟು, ಮೇಲ್ದಂಡೆ ಕೃಷ್ಣ, ಕಳಸಾ-ಬಂಡೂರಿ ಸೇರಿ ಪ್ರಮುಖ ಯೋಜನೆಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಉಪಸಭಾಪತಿ ಉಮಾಶ್ರೀ ಅವರ ಹೇಳಿಕೆಗೆ ಗರಂ ಆದರು.
ಗೃಹಲಕ್ಷ್ಮಿ ಯೋಜನೆ ಒಂದು ವರ್ಷ ನಿಲ್ಲಿಸುವಂತೆ ಕಾಂಗ್ರೆಸ್ ಎಂಎಲ್‌ಸಿ ಆಗ್ರಹ
Source: Vishwavani