ರಾಜ್ಯದ ಬರ ಪೀಡಿತ ರೈತರಿಗೆ ಸರ್ಕಾರ 2,500 ರೂಪಾಯಿ ಪರಿಹಾರ ನೀಡಲಿದೆ ಎಂದು ಪಶುಸಂಗೋಪನಾ ಸಚಿವ ಸಿ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ. ಮುಂಗಾರು ವೈಫಲ್ಯದಿಂದ ಬರ ಉಂಟಾಗಿದ್ದು, 31 ಸಚಿವರು ಪರಿಶೀಲನೆ ನಡೆಸಿದ್ದಾರೆ. ಮೇವು ಕಿಟ್‌ಗಾಗಿ 25 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಅಗತ್ಯವಿರುವ ಕಡೆ ಮೇವು ಬ್ಯಾಂಕ್ ಮತ್ತು ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬರ ಪೀಡಿತ ರೈತರಿಗೆ 2,500 ರೂಪಾಯಿ ಪರಿಹಾರ: ಸಚಿವ ಪುಟ್ಟರಂಗಶೆಟ್ಟಿ
Source: Zee Kannada News