ಬಿಗ್ ಬಾಸ್ ಕನ್ನಡ ಸೀಸನ್ 13ರ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ತಾಂಡವ್ ರಾಮ್ ಮನೆಯಿಂದ ಹೊರನಡೆದರು. ವಿಶೇಷ ಅಡ್ವಾಂಟೇಜ್ ಪಡೆದ ಧನುಷ್, ತಾಂಡವ್ ಅವರಿಂದಲೇ 50 ಪರ್ಸೆಂಟ್ ವೋಟ್ ಪಡೆದು ತಮ್ಮನ್ನು ಸೇಫ್ ಮಾಡಿಕೊಂಡಿದ್ದು, ಅದೇ ತಾಂಡವ್ ಎಲಿಮಿನೇಷನ್‌ಗೆ ಕಾರಣವಾಯಿತು. ತಾಂಡವ್ ನಿರ್ಗಮನದ ವೇಳೆ ಧನುಷ್ ಬಿಕ್ಕಿ ಬಿಕ್ಕಿ ಅತ್ತು ಇದು ಜೀವನದ ಮರೆಯಲಾಗದ ಪಶ್ಚಾತ್ತಾಪ ಎಂದರು. ತಾಂಡವ್ ಕ್ರೀಡಾಸ್ಫೂರ್ತಿ ತೋರಿ ಧನುಷ್‌ಗೆ ಸಮಾಧಾನ ಹೇಳಿದರು.
ಬಿಗ್ ಬಾಸ್ ಕನ್ನಡ 13: ತಾಂಡವ್ ರಾಮ್ ಎಲಿಮಿನೇಷನ್, ಧನುಷ್ ಪಶ್ಚಾತ್ತಾಪ
Source: Zee Kannada News