ಬೆಂಗಳೂರಿನ ಗಾಲ್ಫರ್ ಖಲೀನ್ ಜೋಶಿ 2026ರ ಬೆಂಗಳೂರು ಓಪನ್ ಗಾಲ್ಪ್ ಟೂರ್ನಿಯನ್ನು ಗೆದ್ದಿದ್ದಾರೆ. ಕೆಜಿಎ ಮೈದಾನದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ 2-ಅಂಡರ್ 70 ಸ್ಕೋರ್ ದಾಖಲಿಸಿದ ಅವರು, ಒಟ್ಟು 20-ಅಂಡರ್ 268 ಸ್ಕೋರ್‌ನೊಂದಿಗೆ ಐದು ಶಾಟ್‌ಗಳ ಅಂತರದಲ್ಲಿ ಜಯ ಸಾಧಿಸಿದರು. 34 ವರ್ಷದ ಜೋಶಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ವೈರ್-ಟು-ವೈರ್ ಗೆಲುವು ಸಾಧಿಸಿದರು. ಈ ಗೆಲುವಿನಿಂದ ಅವರು 15 ಲಕ್ಷ ರು. ಬಹುಮಾನ ಪಡೆದು, ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನಲ್ಲಿ ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಬೆಂಗಳೂರು ಓಪನ್ ಗಾಲ್ಪ್ ಪ್ರಶಸ್ತಿ ಖಲೀನ್ ಜೋಶಿಗೆ
Source: Vishwavani