ಬೆಂಗಳೂರಿನಲ್ಲಿ ಭಾನುವಾರ 13ನೇ ಆವೃತ್ತಿಯ 'ಬೆಂಗಳೂರು ಮ್ಯಾರಥಾನ್ 2026' ನಡೆಯಲಿದ್ದು, ಕಂಠೀರವ ಕ್ರೀಡಾಂಗಣದಿಂದ ಮುಂಜಾನೆ 4ರಿಂದ ಬೆಳಗ್ಗೆ 11ರವರೆಗೆ ಮೂರು ಆವೃತ್ತಿಗಳಲ್ಲಿ ಸುಮಾರು 25,000 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಸ್ತೂರ್‌ಬಾ ರಸ್ತೆ, ಎಂ.ಜಿ. ರಸ್ತೆ, ಕಬ್ಬನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಸ್ಪರ್ಧಿಗಳ ವಾಹನಗಳಿಗೆ ಯು.ಬಿ.ಸಿಟಿ, ಫ್ರೀಡಂ ಪಾರ್ಕ್ ಸೇರಿದಂತೆ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನಲ್ಲಿ ನಾಳೆ ಮ್ಯಾರಥಾನ್ 2026: ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಷೇಧ
Source: Public TV