ಮತದಾರರ ಪಟ್ಟಿ ಪರಿಷ್ಕರಣೆ: 14,439 ಮಂದಿಗೆ ಮನೆ ಭೇಟಿ

ಮತದಾರರ ಪಟ್ಟಿ ಪರಿಷ್ಕರಣೆ: 14,439 ಮಂದಿಗೆ ಮನೆ ಭೇಟಿ

ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮ್ಯಾಪಿಂಗ್ ವ್ಯತ್ಯಾಸವಾಗಿರುವ 58,883 ಮತದಾರರಲ್ಲಿ 44,444 ಮಂದಿಯ ವಿಚಾರಣೆ ಪೂರ್ಣಗೊಂಡಿದೆ. ಉಳಿದ 14,439 ಮಂದಿಯ ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿ ದಾಖಲೆ ಸಂಗ್ರಹಿಸಿ ಇಸಿಐ ನೆಟ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27 ರಂದು ಪ್ರಕಟವಾಗಲಿದೆ.

Source: Kannada Dunia

More in Politics

Read the live feed on ZapIndies