ಸೋಡಿಯಂ ಪ್ರಯೋಗ ವಿಡಿಯೋ ಪ್ರಕರಣ: ಡ್ರೋನ್ ಪ್ರತಾಪ್ ಎಫ್ಐಆರ್ ರದ್ದು

ಸೋಡಿಯಂ ಪ್ರಯೋಗ ವಿಡಿಯೋ ಪ್ರಕರಣ: ಡ್ರೋನ್ ಪ್ರತಾಪ್ ಎಫ್ಐಆರ್ ರದ್ದು

ನೀರಿನಲ್ಲಿ ಸೋಡಿಯಂ ಪ್ರಯೋಗದ ವಿಡಿಯೋ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ವಿರುದ್ಧದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಪೀಠವು, ಪ್ರತಾಪ್ ದುರುದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ ಎಂದು ಹೇಳಿದೆ. ಡಿಸೆಂಬರ್ 12, 2024ರಂದು ಪೊಲೀಸರು ಅವರನ್ನು ಬಂಧಿಸಿ, 10 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ತೀರ್ಪಿನ ಬಳಿಕ ಪ್ರತಾಪ್ ಕಣ್ಣೀರಿಟ್ಟು, ಸತ್ಯಕ್ಕೆ ಸಿಕ್ಕ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Source: Vishwavani

More in Crime

Read the live feed on ZapIndies