ನೇಪಾಳದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಕುಸಿತ ಮತ್ತು ಪ್ರವಾಹ ಉಂಟಾಗಿ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ, 14 ಮಂದಿ ನಾಪತ್ತೆಯಾಗಿದ್ದಾರೆ. ಗಂಡಕಿ ಪ್ರಾಂತ್ಯದ ಮನಾಂಗ್, ಮ್ಯಾಗ್ದಿ, ಬಾಗ್ಲುಂಗ್, ಪರ್ಬತ್ ಮತ್ತು ಪಾಲ್ಪಾ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. 747 ಕುಟುಂಬಗಳು ಬಾಧಿತವಾಗಿದ್ದು, 143 ಮನೆಗಳು ಸಂಪೂರ್ಣ ನಾಶವಾಗಿವೆ; ಸುಮಾರು 1,500 ಮಂದಿ ಸ್ಥಳಾಂತರಗೊಂಡಿದ್ದಾರೆ.
ನೇಪಾಳದಲ್ಲಿ ಮಳೆ ಅವಾಂತರ: 24 ಸಾವು, 14 ನಾಪತ್ತೆ
Source: Vishwavani