ಐಪಿಎಲ್ 2027ರ ಹರಾಜಿಗೆ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಂಡ ತೊರೆಯಲು ನಿರ್ಧರಿಸಿದ್ದಾರೆ. ನಾಯಕತ್ವ ಇಶಾನ್ ಕಿಶನ್‌ಗೆ ನೀಡಿದ್ದರಿಂದ ಅಸಮಾಧಾನಗೊಂಡ ಅವರು ಬೇರೆ ಫ್ರಾಂಚೈಸಿಯಲ್ಲಿ ಆಡಲು ಬಯಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಆಸಕ್ತಿ ತೋರಿವೆ. ಆದರೆ ಎಸ್‌ಆರ್‌ಎಚ್ ಸಿಇಒ ಕೆ ಷಣ್ಮುಗಂ ಈ ವದಂತಿಗಳನ್ನು ಅಲ್ಲಗಳೆದಿದ್ದಾರೆ.
ಐಪಿಎಲ್ 2027: ಎಸ್‌ಆರ್‌ಎಚ್ ತೊರೆಯಲು ಅಭಿಷೇಕ್ ಶರ್ಮಾ ನಿರ್ಧಾರ
Source: Vishwavani