ಕರ್ನಾಟಕದಲ್ಲಿ ಅಂಕ ಆಧಾರಿತ ಚಾಲನಾ ಪರವಾನಗಿ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ನಿಗದಿತ ಮಿತಿ ಮೀರಿದರೆ ಪರವಾನಗಿ ಅಮಾನತುಗೊಳ್ಳಲಿದೆ. ಕಾಲುದಾರಿ ಪಾರ್ಕಿಂಗ್ ದಂಡ ₹500 ರಿಂದ ₹5,000ಕ್ಕೆ ಏರಿಕೆ, ಒನ್-ವೇ ಉಲ್ಲಂಘನೆಗೂ ₹5,000 ದಂಡ ವಿಧಿಸಲು ನಿರ್ಧರಿಸಲಾಗಿದೆ. ಮೆಟ್ರೋ ಕಾಮಗಾರಿ ಮುಗಿದ ಬೆಂಗಳೂರು ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮೀಸಲು ಪಥ ಮರುಜಾರಿಗೊಳ್ಳಲಿದೆ. ಕ್ಯಾಬ್ ಸ್ಥಿರ ದರ ಪರಿಷ್ಕರಣೆ ಹಾಗೂ ಸಾರಥಿ-ಇ-ಚಲನ್ ಸಂಯೋಜನೆ ಕುರಿತೂ ಚರ್ಚೆಯಾಗಿದೆ.
ಕರ್ನಾಟಕದಲ್ಲಿ ಅಂಕ ಆಧಾರಿತ ಚಾಲನಾ ಪರವಾನಗಿ ಜಾರಿಗೆ ಚಿಂತನೆ
Source: Bhatkallys