ಶ್ರೀನಗರದಲ್ಲಿ ನಡೆದ ಇರಾನಿ ಕಪ್ ಪಂದ್ಯದಲ್ಲಿ 'ರೆಸ್ಟ್ ಆಫ್ ಇಂಡಿಯಾ' ತಂಡವು ಜಮ್ಮು ಮತ್ತು ಕಾಶ್ಮೀರವನ್ನು 167 ರನ್‌ಗಳಿಂದ ಸೋಲಿಸಿ 2026-27ರ ಪ್ರಶಸ್ತಿ ಗೆದ್ದುಕೊಂಡಿತು. ಮುಕೇಶ್ ಕುಮಾರ್ (33ಕ್ಕೆ 6) ಮತ್ತು ಆಕಾಶ್ ದೀಪ್ (25ಕ್ಕೆ 3) ಅವರ ದಾಳಿಯಿಂದ ಜಮ್ಮು-ಕಾಶ್ಮೀರ 111 ರನ್‌ಗಳಿಗೆ ಆಲೌಟ್ ಆಯಿತು. ಇದು 'ರೆಸ್ಟ್ ಆಫ್ ಇಂಡಿಯಾ'ದ 31ನೇ ಇರಾನಿ ಕಪ್ ಗೆಲುವು; ಕಳೆದ ಐದು ಸೀಸನ್‌ಗಳಲ್ಲಿ ಮೂರನೇ ಬಾರಿ ಈ ಸಾಧನೆ.
ಇರಾನಿ ಕಪ್: ಜಮ್ಮು-ಕಾಶ್ಮೀರವನ್ನು 167 ರನ್‌ಗಳಿಂದ ಸೋಲಿಸಿ 'ರೆಸ್ಟ್ ಆಫ್ ಇಂಡಿಯಾ' ಚಾಂಪಿಯನ್
Source: Vishwavani