ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್‌ನ ಮೈವಾಂಡ್‌ನಲ್ಲಿ 70 ಮೀಟರ್ ಆಳದ ಕೊಳವೆಬಾವಿಯಲ್ಲಿ ಸಿಲುಕಿದ್ದ ಐದು ವರ್ಷದ ಝೈನುಲ್ಲಾನನ್ನು 11 ವರ್ಷದ ಹಝ್ರತ್ ಉಮರ್ ರಕ್ಷಿಸಿದ್ದಾನೆ. ಕೇವಲ 30 ಸೆಂ.ಮೀ. ಅಗಲದ ಪೈಪ್‌ನಲ್ಲಿ ವಯಸ್ಕರಿಗೆ ಇಳಿಯಲು ಸಾಧ್ಯವಾಗದ ಕಾರಣ ಉಮರ್ ಎರಡನೇ ಪ್ರಯತ್ನದಲ್ಲಿ ಕೆಳಗಿಳಿದು ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆ ತಂದನು. ಆಸ್ಪತ್ರೆಗೆ ದಾಖಲಿಸಿದ್ದ ಝೈನುಲ್ಲಾನನ್ನು ಮರುದಿನ ಬಿಡುಗಡೆ ಮಾಡಲಾಯಿತು.
ಅಫ್ಘಾನಿಸ್ತಾನ: 70 ಮೀ. ಕೊಳವೆಬಾವಿಯಲ್ಲಿ ಸಿಲುಕಿದ ಬಾಲಕನ ರಕ್ಷಣೆ
Source: Vartha Bharati