ಮಂಗಳೂರಿನ ಪಿಲಿಕುಲ ವಿಜ್ಞಾನ ಕೇಂದ್ರದಲ್ಲಿ ಅಕ್ಟೋಬರ್ 7 ಮತ್ತು 8ರಂದು ವಿಶ್ವ ಬಾಹ್ಯಾಕಾಶ ಸಪ್ತಾಹ ಆಚರಣೆ ನಡೆಯಲಿದೆ. ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರ ಮತ್ತು ಇಸ್ರೋದ ಯು.ಆರ್. ರಾವ್ ಉಪಗ್ರಹ ಕೇಂದ್ರ ಸಂಯುಕ್ತವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ, ಉಪಗ್ರಹ ಮಾದರಿ ತಯಾರಿಕೆ ಸ್ಪರ್ಧೆ, ಕ್ವಿಜ್, ಜಲ ರಾಕೆಟ್ ಪ್ರದರ್ಶನ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರಿಗೂ ಮುಕ್ತವಾಗಿದೆ.
ಪಿಲಿಕುಲ ವಿಜ್ಞಾನ ಕೇಂದ್ರದಲ್ಲಿ ಅಕ್ಟೋಬರ್ 7ರಿಂದ ವಿಶ್ವ ಬಾಹ್ಯಾಕಾಶ ಸಪ್ತಾಹ
Source: Mangalorean