ತುಮಕೂರು ದಸರಾದಲ್ಲಿ ಕಾಡುಗೊಲ್ಲರ ಅಲಗು ಕುಣಿತ ಪ್ರದರ್ಶನ

ತುಮಕೂರು ದಸರಾದಲ್ಲಿ ಕಾಡುಗೊಲ್ಲರ ಅಲಗು ಕುಣಿತ ಪ್ರದರ್ಶನ

ತುಮಕೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲೆ 'ಅಲಗು ಕುಣಿತ' ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು. ಮಧುಗಿರಿ ತಾಲೂಕಿನ ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪಿಡಿಓ ಬೋರಣ್ಣನವರ ತಂಡದ ಜಾನಪದ ಕಲಾವಿದರು ಈ ಪ್ರದರ್ಶನ ನೀಡಿದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಜಾನಪದ ಕಲಾವಿದ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಜೊತೆಗೆ ಮನೆವು ಕುಣಿತ, ಕೋಲಾಟ ಮತ್ತು ದೇವರು ಕುಣಿತ ಪ್ರದರ್ಶನಗೊಂಡವು.

Source: Filmibeat Kannada

More in Entertainment

Read the live feed on ZapIndies