ಚೆನ್ನೈನಲ್ಲಿ ಆಟೋ ದರ ಪರಿಷ್ಕರಣೆ ಮತ್ತು ಚಾಲಕರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಫೆಡರೇಶನ್ ಆಫ್ ಆಲ್ ಆಟೋ ಟ್ರೇಡ್ ಯೂನಿಯನ್ಸ್ ಇಂದು ಸಂಜೆ ಎಗ್ಮೋರ್ನಿಂದ ಫೋರ್ಟ್ ಸೇಂಟ್ ಜಾರ್ಜ್ವರೆಗೆ ಮೆರವಣಿಗೆ ನಡೆಸುತ್ತಿದೆ. 2013ರ ದರಗಳೇ ಜಾರಿಯಲ್ಲಿದ್ದು, ಇಂಧನ, ವಿಮೆ ಮತ್ತು ಬಿಡಿಭಾಗಗಳ ಬೆಲೆ ಏರಿಕೆಯಿಂದ ಚಾಲಕರು ಸಂಕಷ್ಟದಲ್ಲಿದ್ದಾರೆ. ಮೆಟ್ರೋ ವಿಸ್ತರಣೆ, ಮಹಿಳೆಯರ ಉಚಿತ ಬಸ್ ಪ್ರಯಾಣ ಮತ್ತು ಬೈಕ್-ಟ್ಯಾಕ್ಸಿ ಸೇವೆಗಳಿಂದ ಆದಾಯ ಕುಸಿದಿದೆ ಎಂದು ಯೂನಿಯನ್ ಆರೋಪಿಸಿದೆ.
ಚೆನ್ನೈನಲ್ಲಿ ಆಟೋ ಚಾಲಕರ ಮೆರವಣಿಗೆ: ದರ ಪರಿಷ್ಕರಣೆಗೆ ಆಗ್ರಹ
Source: Mangalorean