ಆಕ್ರಮಿತ ಪಶ್ಚಿಮ ದಂಡೆಯ ಅಲ್-ಖಲೀಲ್ ನಗರದಲ್ಲಿ ಇಸ್ರೇಲಿ ಮುತ್ತಿಗೆಯಿಂದ ಕಳೆದ ವಾರ ಸುಮಾರು 80,000 ಪ್ಯಾಲೆಸ್ತೀನಿ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯಲಿಲ್ಲ ಎಂದು ಪ್ಯಾಲೆಸ್ತೀನಿ ಶಿಕ್ಷಕರ ಸಾಮಾನ್ಯ ಒಕ್ಕೂಟ ತಿಳಿಸಿದೆ. 220 ಶಾಲೆಗಳು ಬಾಧಿತವಾಗಿದ್ದು, 537 ಕುಟುಂಬಗಳು ಸ್ಥಳಾಂತರಗೊಂಡಿವೆ. ಭಾನುವಾರ ಮಸಾಫರ್ ಯಟ್ಟಾದಲ್ಲಿ 10 ಶಿಕ್ಷಕರನ್ನು ಸೇನೆ ಕೆಲವು ಗಂಟೆಗಳ ಕಾಲ ವಶಕ್ಕೆ ತೆಗೆದುಕೊಂಡ ಘಟನೆಯನ್ನೂ ಒಕ್ಕೂಟ ಖಂಡಿಸಿದೆ.
ಅಲ್-ಖಲೀಲ್ ಮುತ್ತಿಗೆಯಿಂದ 80,000 ವಿದ್ಯಾರ್ಥಿಗಳ ಶಿಕ್ಷಣ ಅಸ್ತವ್ಯಸ್ತ
Source: Coastal Digest