ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ಜಾಲ ನಿರ್ವಹಿಸುವ ನೆಫ್ರೋಪ್ಲಸ್, ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 585.2 ಕೋಟಿ ರೂ. ಆದಾಯ ಗಳಿಸಿ ಶೇ.23.6ರ ಬೆಳವಣಿಗೆ ದಾಖಲಿಸಿದೆ. ನಿವ್ವಳ ಲಾಭ ಶೇ.34.7ರಷ್ಟು ಏರಿ 76.1 ಕೋಟಿ ರೂ.ಗೆ ತಲುಪಿದ್ದು, ಕಾರ್ಯಾಚರಣೆ ಲಾಭ 134.4 ಕೋಟಿ ರೂ. ಆಗಿದೆ. ಆರು ತಿಂಗಳಲ್ಲಿ 21.01 ಲಕ್ಷ ಚಿಕಿತ್ಸೆಗಳನ್ನು ಒದಗಿಸಿದ ಕಂಪನಿ, ಕಜಕಿಸ್ತಾನದ ಅಲ್ಮಾಟಿಯಲ್ಲಿ ಕ್ಲಿನಿಕ್‌ಗಳನ್ನು ಸ್ವಾಧೀನಪಡಿಸಿಕೊಂಡು ಜಾಗತಿಕ ವಿಸ್ತರಣೆ ಮುಂದುವರಿಸಿದೆ.
ನೆಫ್ರೋಪ್ಲಸ್ ನಿವ್ವಳ ಲಾಭ ಶೇ.34.7ರಷ್ಟು ಏರಿಕೆ
Source: Vishwavani