ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಬ್ಯಾಂಡ್‌ನ ಸ್ಟ್ರಾಪ್ ಕಳಚಿ ಸಣ್ಣ ಪಿನ್ ಮೈದಾನದ ಹುಲ್ಲಿನ ಮೇಲೆ ಬಿದ್ದಿತು. ಕೊಹ್ಲಿ ಮತ್ತು ಶುಭ್‌ಮನ್ ಗಿಲ್ ಹುಡುಕಾಡಿದರೂ ಸಿಗದ ಪಿನ್ ಅನ್ನು ಆನ್‌ಫೀಲ್ಡ್ ಅಂಪೈರ್ ಪತ್ತೆಹಚ್ಚಿ ಕೊಹ್ಲಿಗೆ ನೀಡಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡುವೆ ಮೈದಾನದಲ್ಲಿ ಪಿನ್ ಹುಡುಕಾಟ
Source: Zee Kannada News