ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನವೆಂಬರ್ 1ರಂದು ನಡೆದ ‘ಇಂಡಿಯಾ’ ಒಕ್ಕೂಟದ ರ್ಯಾಲಿಗೆ ಗೈರಾಗಿದ್ದಕ್ಕಾಗಿ ಭಾರತೀಯ ಯೂತ್ ಕಾಂಗ್ರೆಸ್ 7 ರಾಜ್ಯಗಳ ಸುಮಾರು 200 ಪದಾಧಿಕಾರಿಗಳನ್ನು ಅಮಾನತುಗೊಳಿಸಿದೆ. ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು 60 ಮಂದಿ ಕ್ರಮಕ್ಕೆ ಒಳಗಾಗಿದ್ದಾರೆ. ಕೌಟುಂಬಿಕ ಕಾರಣಕ್ಕೆ ಗೈರಾಗಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ರಾಜೋರಿಯಾ ಅವರನ್ನೂ ಪಕ್ಷ ವಜಾಗೊಳಿಸಿದ್ದು, ಆಂತರಿಕ ಅಸಮಾಧಾನ ಮೂಡಿದೆ.
ರಾಹುಲ್ ಗಾಂಧಿ ರ್ಯಾಲಿ ಗೈರು: ಯೂತ್ ಕಾಂಗ್ರೆಸ್ನ 200 ಪದಾಧಿಕಾರಿಗಳ ಅಮಾನತು
Source: Vishwavani