ದೀಪಾವಳಿ ಹಬ್ಬ ಮತ್ತು ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಕೆಎಸ್ಆರ್ಟಿಸಿ 2,600 ಹೆಚ್ಚುವರಿ ವಿಶೇಷ ಬಸ್ಗಳನ್ನು ನಡೆಸಲಿದೆ. ನವೆಂಬರ್ 6ರಿಂದ 8ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಮತ್ತು ಅಂತರರಾಜ್ಯ ಮಾರ್ಗಗಳಿಗೆ ಹಾಗೂ ನವೆಂಬರ್ 10 ಮತ್ತು 11ರಂದು ಮರಳಿ ಬೆಂಗಳೂರಿಗೆ ಬಸ್ಗಳು ಸಂಚರಿಸಲಿವೆ. ಮುಂಗಡ ಕಾಯ್ದಿರಿಸುವಿಕೆಗೆ ರಿಯಾಯಿತಿ ಮತ್ತು ವೆಬ್ಸೈಟ್ನಲ್ಲಿ ಇ-ಟಿಕೆಟ್ ಸೌಲಭ್ಯವಿದೆ.
ದೀಪಾವಳಿಗೆ ಕೆಎಸ್ಆರ್ಟಿಸಿಯಿಂದ 2,600 ಹೆಚ್ಚುವರಿ ಬಸ್ಗಳು
Source: Zee Kannada News