ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ಕೇಂದ್ರ ತೈಲ ಸಚಿವಾಲಯ ಮತ್ತು ಸಾರ್ವಜನಿಕ ವಲಯದ ತೈಲ ಕಂಪನಿಗಳು ತಿರಸ್ಕರಿಸಿವೆ. ದೇಶಾದ್ಯಂತ ಸರಬರಾಜಾಗುವ E20 ಇಂಧನವು BIS ಮಾನದಂಡಗಳನ್ನು ಪೂರೈಸುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರದ ಮಾದರಿ ಸಂಗ್ರಹಣೆಯಲ್ಲಿ ಕಂಪನಿ ಪ್ರತಿನಿಧಿಗಳಿರಲಿಲ್ಲ ಎಂದು IOCL, BPCL, HPCL ಆಕ್ಷೇಪಿಸಿವೆ. ಗೊಂದಲ ಬಗೆಹರಿಸಲು ಜಂಟಿ ಮರುಪರೀಕ್ಷೆಗೆ ಸಿದ್ಧ ಎಂದಿವೆ.
ಎಥೆನಾಲ್ ಮಿಶ್ರಣ ಆರೋಪ ತಿರಸ್ಕರಿಸಿದ ಕೇಂದ್ರ
Source: Vishwavani