ಒಲಿಂಪಿಯನ್ ಜೂಡೋ ಪಟು ತುಲಿಕಾ ಮಾನ್ ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ತಾತ್ಕಾಲಿಕವಾಗಿ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ 2026ರ ಕಾಮನ್‌ವೆಲ್ತ್ ಗೇಮ್ಸ್ ತಂಡದಿಂದ ಕೈಬಿಡಲಾಗಿದೆ. 12 ತಿಂಗಳಲ್ಲಿ ಮೂರು ಬಾರಿ 'ವೇರ್‌ಅಬೌಟ್ಸ್' ನಿಯಮ ಉಲ್ಲಂಘಿಸಿದ ಆರೋಪದಿಂದ ಈ ಕ್ರಮ ಕೈಗೊಳ್ಳಲಾಗಿದೆ. ತುಲಿಕಾ ಮಹಿಳೆಯರ +78 ಕೆಜಿ ವಿಭಾಗದಲ್ಲಿ ಪದಕ ನಿರೀಕ್ಷೆಯಾಗಿದ್ದರು. ಇವರ ಅನುಪಸ್ಥಿತಿ ಭಾರತದ ಜೂಡೋ ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ.
ತುಲಿಕಾ ಮಾನ್ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಔಟ್
Source: Vishwavani
Read the live feed on ZapIndies