ಬೆಂಗಳೂರಿನ ರಾಮೋಹಳ್ಳಿ ಕೆರೆಯಲ್ಲಿ ಸೂಟ್ಕೇಸ್ನಲ್ಲಿ ವೃದ್ಧೆ ಜಯಮ್ಮನ ಶವ ಪತ್ತೆಯಾದ ಪ್ರಕರಣದಲ್ಲಿ ಆರೋಪಿ ಗಗನ್ ಅರೆಸ್ಟ್ ಆಗಿದ್ದಾನೆ. ಆತ ಚಿನ್ನದ ಆಸೆಗಾಗಿ ಕೊಲೆ ಮಾಡಿ, ಶವವನ್ನು ಹೇಗೆ ಸಾಗಿಸಬೇಕು ಮತ್ತು ನೀರಿನಲ್ಲಿ ಎಷ್ಟು ದಿನ ತೇಲುತ್ತದೆ ಎಂಬುದನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿ ಯೋಜನೆ ರೂಪಿಸಿದ್ದ. ರಾತ್ರಿಯಿಡೀ ಶವವನ್ನು ಮಂಚದಡಿಯಲ್ಲಿ ಇಟ್ಟು, ಮರುದಿನ ಬೈಕಿನಲ್ಲಿ 8 ಕಿ.ಮೀ ದೂರ ಸಾಗಿಸಿ ಕೆರೆಗೆ ಎಸೆದಿದ್ದ. ತನಿಖೆ ವೇಳೆ ಪೊಲೀಸರ ಜೊತೆ ಸುತ್ತಾಡಿದ್ದ ಗಗನ್, ಸಿಸಿಟಿವಿಯಿಂದ ಬಯಲಾಗಿದ್ದಾನೆ.
ರಾಮೋಹಳ್ಳಿ ಕೆರೆ ಪ್ರಕರಣ: ಗೂಗಲ್ ಸರ್ಚ್ ಮಾಡಿ ಕೊಲೆ ಯೋಜನೆ
Source: Zee Kannada News
Read the live feed on ZapIndies