ಸ್ಪೈಡರ್ ಮ್ಯಾನ್ ಪ್ರಚಾರಕ್ಕೆ ರಿಷಬ್ ಶೆಟ್ಟಿ ಆಯ್ಕೆ

ಸ್ಪೈಡರ್ ಮ್ಯಾನ್ ಪ್ರಚಾರಕ್ಕೆ ರಿಷಬ್ ಶೆಟ್ಟಿ ಆಯ್ಕೆ

ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ತನ್ನ ಮುಂಬರುವ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಇಂತಹ ಬೃಹತ್ ಹಾಲಿವುಡ್ ಚಿತ್ರದ ಪ್ರಚಾರದ ಪ್ರಮುಖ ಭಾಗವಾಗಿ ಆಯ್ಕೆಯಾದ ಭಾರತದ ಮೊದಲ ನಟ ಎಂಬ ಹೆಗ್ಗಳಿಕೆಗೆ ರಿಷಬ್ ಪಾತ್ರರಾಗಿದ್ದಾರೆ. ಸೋನಿ ಪಿಕ್ಚರ್ಸ್ ಬಿಡುಗಡೆ ಮಾಡಿರುವ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಾಮ್ ಹಾಲ್ಯಾಂಡ್ ಅಭಿನಯದ ಈ ಸಿನಿಮಾ ಜುಲೈ 30 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Source: Vishwavani

Read the live feed on ZapIndies