ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನವದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರ ಸಭೆ ನಡೆಸಿದರು. ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ 13 ಅಂಶಗಳು, 15ನೇ ಹಣಕಾಸು ಆಯೋಗದ ಅನುದಾನ, ಬೆಂಗಳೂರಿನ STRR ಯೋಜನೆ, ಕೋಲಾರದ ರೈಲ್ವೇ ಕೋಚ್ ಕಾರ್ಖಾನೆ ಸೇರಿದಂತೆ ಯೋಜನೆಗಳ ಜಾರಿಗೆ ಒಗ್ಗಟ್ಟಾಗಿ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲು ಮನವಿ ಮಾಡಿದರು. ರಾಜ್ಯದ ಬರ ಪರಿಸ್ಥಿತಿ, ತುಂಗಭದ್ರಾ ನವಿಲೆ ಸಮತೋಲನ ಜಲಾಶಯ, ನದಿ ಜೋಡಣೆ ಯೋಜನೆ, ಮೇಕೆದಾಟು, ಕೃಷ್ಣ ನ್ಯಾಯಮಂಡಳಿ, ಮಹದಾಯಿ ವಿಚಾರಗಳು ಚರ್ಚೆಯಾದವು.
ಸಂಸದರೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಮಹತ್ವದ ಸಭೆ
Source: Kannada Dunia
Read the live feed on ZapIndies