ಅಜಯ ಬಾಬುಗೆ ಒಂದು ಅಂಕದ ಅಂತರದಲ್ಲಿ ಬೆಳ್ಳಿ

ಅಜಯ ಬಾಬುಗೆ ಒಂದು ಅಂಕದ ಅಂತರದಲ್ಲಿ ಬೆಳ್ಳಿ

ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 79 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಭಾರತದ ವಲ್ಲೂರಿ ಅಜಯ ಬಾಬು ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು 330 ಕೆಜಿ (149 ಸ್ನ್ಯಾಚ್ + 181 ಕ್ಲೀನ್ ಮತ್ತು ಜರ್ಕ್) ಎತ್ತಿದರು. ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ 331 ಕೆಜಿಯೊಂದಿಗೆ ಕೂಟ ದಾಖಲೆ ಸ್ಥಾಪಿಸಿ ಚಿನ್ನ ಗೆದ್ದರು. ಕೇವಲ ಒಂದು ಕೆಜಿ ಅಂತರದಿಂದ ಚಿನ್ನ ತಪ್ಪಿಸಿಕೊಂಡ ಅಜಯ ಬಾಬು, ಭಾರತದ ಆರನೇ ವೇಟ್ಲಿಫ್ಟಿಂಗ್ ಪದಕ ತಂದುಕೊಟ್ಟರು.

Source: Vishwavani

Read the live feed on ZapIndies