ನಟ ಯಶ್ ಅವರು ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಸೆಟ್ನಲ್ಲಿ ರಾವಣನ ಪಾತ್ರಕ್ಕೆ ತಯಾರಿ ನಡೆಸುವಾಗ ದೊಡ್ಡ ಸ್ಪೀಕರ್ ಇಟ್ಟು ಶಿವನ ಹಾಡುಗಳನ್ನು ಜೋರಾಗಿ ಹಾಕುತ್ತಿದ್ದರಂತೆ. ಸಂಗೀತದ ಸೌಂಡ್ ಎಷ್ಟು ಹೆಚ್ಚಿತ್ತೆಂದರೆ ಸೆಟ್ನಲ್ಲಿದ್ದ ಇತರರು ಮಾತನಾಡಲು ಕಷ್ಟಪಡುತ್ತಿದ್ದರು. ಈ ಕುತೂಹಲಕಾರಿ ಘಟನೆಯನ್ನು ಯಶ್ ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದು, ಮೊದಲ ಕಂತು 2026ರ ದೀಪಾವಳಿಗೆ ಬಿಡುಗಡೆಯಾಗಲಿದೆ.
ರಾಮಾಯಣ ಸೆಟ್ನಲ್ಲಿ ಶಿವನ ಭಕ್ತಿಗೀತೆ ಕೇಳುತ್ತಿದ್ದ ಯಶ್
Source: Vishwavani
Read the live feed on ZapIndies