ಕನ್ನಡತಿ ಶಿಲ್ಪಾಗೆ ಕಾಮನ್ವೆಲ್ತ್ ಕಂಚು

ಕನ್ನಡತಿ ಶಿಲ್ಪಾಗೆ ಕಾಮನ್ವೆಲ್ತ್ ಕಂಚು

ಮೈಸೂರಿನ ಪ್ಯಾರಾ ಅಥ್ಲೀಟ್ ಕೆ.ಎಸ್. ಶಿಲ್ಪಾ ಅವರು ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026 ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಎಫ್-57 ಶಾಟ್ ಪುಟ್ ವಿಭಾಗದಲ್ಲಿ 7.26 ಮೀಟರ್ ಎಸೆದು ಕಂಚಿನ ಪದಕ ಗೆದ್ದಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡ ಶಿಲ್ಪಾ ಛಲ ಬಿಡದೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ 29ನೇ ವಯಸ್ಸಿನಲ್ಲಿ ಕ್ರೀಡೆಗೆ ತಿರುಗಿದರು. ಕೋಚ್ ರಾಘವೇಂದ್ರ ಹಾಗೂ ಎಸ್.ಡಿ. ಈಶನ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾರೆ.

Source: Zee Kannada News

Read the live feed on ZapIndies