ಮಹಿಳಾ ದೀ ಹಂಡ್ರೆಡ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ 50 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 88 ರನ್ ಸಿಡಿಸಿದರು. ವಿಕೆಟ್‌ಗಳು ಉರುಳಿದರೂ ಅವರು ಏಕಾಂಗಿ ಹೋರಾಟ ನಡೆಸಿ 4 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಲೀಗ್‌ನಲ್ಲಿ ಭಾರತೀಯ ಆಟಗಾರ್ತಿಯರ ಪೈಕಿ ಇದು ಎರಡನೇ ಅತ್ಯಧಿಕ ಸ್ಕೋರ್ ಆಗಿದೆ.
ಸ್ಮೃತಿ ಮಂಧಾನ ಅಜೇಯ 88; ಮ್ಯಾಂಚೆಸ್ಟರ್ ಗೆಲುವು
Source: Zee Kannada News
Read the live feed on ZapIndies