ಕರ್ನಾಟಕದಲ್ಲಿ 84.31 ಲಕ್ಷ ಮತದಾರರು ಪಟ್ಟಿಯಿಂದ ಹೊರಗೆ

ಕರ್ನಾಟಕದಲ್ಲಿ 84.31 ಲಕ್ಷ ಮತದಾರರು ಪಟ್ಟಿಯಿಂದ ಹೊರಗೆ

ರಾಜ್ಯದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮೊದಲ ಕರಡು ಪಟ್ಟಿಯಿಂದ 84.31 ಲಕ್ಷ ಮತದಾರರನ್ನು ಹೊರಗಿಡಲು ಗುರುತಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ತಿಳಿಸಿದ್ದಾರೆ. ಇದರಲ್ಲಿ 51.74 ಲಕ್ಷ ಸ್ಥಳಾಂತರಗೊಂಡವರು, 14.99 ಲಕ್ಷ ಮೃತಪಟ್ಟವರು, 11.61 ಲಕ್ಷ ನಾಪತ್ತೆಯಾದವರು ಮತ್ತು 5.62 ಲಕ್ಷ ನಕಲಿ ಮತದಾರರು ಸೇರಿದ್ದಾರೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ 39.38 ಲಕ್ಷ ಮತದಾರರ ಸುಳಿವಿಲ್ಲ ಎನ್ನುವುದು ಆಯೋಗಕ್ಕೆ ಸವಾಲಾಗಿದೆ. ಆಗಸ್ಟ್ 8ರೊಳಗೆ ಅರ್ಹ ಮತದಾರರು ತಮ್ಮ ಹೆಸರು ಉಳಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು.

Source: Zee Kannada News

Read the live feed on ZapIndies