ವರ್ತೂರು ಕ್ರಿಕೆಟ್‌ನ ರುಂಡ ನಿಜಕ್ಕೂ ಆತ್ಮಹತ್ಯೆ ಪ್ರಕರಣ

ವರ್ತೂರು ಕ್ರಿಕೆಟ್‌ನ ರುಂಡ ನಿಜಕ್ಕೂ ಆತ್ಮಹತ್ಯೆ ಪ್ರಕರಣ

ಬೆಂಗಳೂರಿನ ವರ್ತೂರು ಬಳಿಯ ಕೊಡತಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಮಾನವ ರುಂಡ ಪತ್ತೆಯಾಗಿತ್ತು. ಮೊದಲು ಕೊಲೆ ಶಂಕೆ ವ್ಯಕ್ತವಾಗಿತ್ತಾದರೂ, ಪೊಲೀಸರ ತನಿಖೆಯಲ್ಲಿ ಇದು ಆತ್ಮಹತ್ಯೆ ಪ್ರಕರಣ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಪುಂಗನೂರು ಮೂಲದ ವಿಶ್ವನಾಥ್ (28) ಎಂಬ ಯುವಕನ ತಲೆ ರೈಲಿಗೆ ಸಿಕ್ಕು ಕತ್ತರಿಸಲಾಗಿತ್ತು. ಬೀದಿ ನಾಯಿಗಳು ಅದನ್ನು 400 ಮೀಟರ್ ದೂರ ಕಚ್ಚಿಕೊಂಡು ಬಂದು ಗ್ರೌಂಡ್‌ನಲ್ಲಿ ತಂದಿಟ್ಟಿದ್ದವು. ಪ್ರಕರಣವನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Source: Vishwavani

Read the live feed on ZapIndies