ತುಮಕೂರಿನಲ್ಲಿ ಇಲಿಯಿಂದ 10 ಲಕ್ಷ ಚಿನ್ನಾಭರಣ ಕಳ್ಳತನ

ತುಮಕೂರಿನಲ್ಲಿ ಇಲಿಯಿಂದ 10 ಲಕ್ಷ ಚಿನ್ನಾಭರಣ ಕಳ್ಳತನ

ತುಮಕೂರಿನ ವಿಶ್ವಾಸ್ ಜ್ಯುವೆಲ್ಲರಿಯಲ್ಲಿ ಇಲಿಯೊಂದು ರಾತ್ರಿ ನುಗ್ಗಿ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಎಗರಿಸಿದೆ. ಶಟರ್ ಮುರಿಯದೆ, ಯಾರೂ ಪ್ರವೇಶಿಸದಿದ್ದರೂ ಆಭರಣಗಳು ಕಾಣೆಯಾಗಿದ್ದವು. ಸಿಸಿಟಿವಿ ಪರಿಶೀಲಿಸಿದಾಗ ಇಲಿ ಆಭರಣಗಳನ್ನು ಬಿಲಕ್ಕೆ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಸಿಬ್ಬಂದಿ ಇಲಿ ಬಿಲ ತೋಡಿ 10 ಉಂಗುರ ಮತ್ತು 3 ಸರಗಳನ್ನು ವಶಪಡಿಸಿಕೊಂಡಿದ್ದಾರೆ.

Source: Zee Kannada News

Read the live feed on ZapIndies