ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಡತಿ ಸಮೀಪ ಕೂಲ್ ಡ್ರಿಂಕ್ಸ್ ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಕಂಟ್ರಿಮೇಡ್ ಪಿಸ್ತೂಲ್ ತೋರಿಸಿ ಹಣ ದೋಚಿದ ಪ್ರಕರಣದಲ್ಲಿ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಅಪ್ರಾಪ್ತನೂ ಸೇರಿದ್ದಾನೆ. ತನಿಖೆಯಲ್ಲಿ ಲಾರಿ ಚಾಲಕ ಅಜಯ್ ಕುಮಾರ್ ತನ್ನ ಸ್ನೇಹಿತರೊಂದಿಗೆ ಪೂರ್ವನಿಯೋಜಿತವಾಗಿ ಈ ದರೋಡೆಯನ್ನು ರೂಪಿಸಿದ್ದು ಬೆಳಕಿಗೆ ಬಂದಿದೆ. ಘಟನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದ್ದು, ಲಾರಿಯಲ್ಲಿ ಕೇವಲ ₹16 ಸಾವಿರ ಇದ್ದುದರಿಂದ ಆರೋಪಿಗಳು ನಿರಾಶರಾಗಿ ಪರಾರಿಯಾಗಿದ್ದರು.
ಬೆಂಗಳೂರಿನಲ್ಲಿ ನಡುರಸ್ತೆ ದರೋಡೆ; ಲಾರಿ ಚಾಲಕನೇ ಸಂಚುಕೋರ
Source: Zee Kannada News
Read the live feed on ZapIndies