ಕೀರ್ತಿ ಕುಲ್ಹಾರಿ ಅಕೌಂಟ್‌ನಿಂದ 2.43 ಲಕ್ಷ ರೂ. ಕಳವು

ಕೀರ್ತಿ ಕುಲ್ಹಾರಿ ಅಕೌಂಟ್‌ನಿಂದ 2.43 ಲಕ್ಷ ರೂ. ಕಳವು

ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ ಅವರ ಕ್ರೆಡಿಟ್ ಕಾರ್ಡ್‌ನಿಂದ 2.43 ಲಕ್ಷ ರೂಪಾಯಿ ವಂಚನೆಯಾಗಿದೆ. ಜುಲೈ 24ರ ರಾತ್ರಿ ಮುಂಬೈನ ಅಂಧೇರಿಯ ಮಲ್ಟಿಪ್ಲೆಕ್ಸ್‌ನಲ್ಲಿದ್ದಾಗ ಅವರ ಮೊಬೈಲ್‌ಗೆ ವಿದೇಶಿ ವಿಮಾನಯಾನ ಕಂಪನಿಯ ಹೆಸರಲ್ಲಿ ವಹಿವಾಟಿನ ಸಂದೇಶಗಳು ಬಂದವು. ಯಾವುದೇ OTP ಅಥವಾ ಪಿನ್ ಹಂಚಿಕೊಳ್ಳದಿದ್ದರೂ ನಾಲ್ಕು ಬಾರಿ ಹಣ ಕಡಿತವಾಗಿದೆ. ಬ್ಯಾಂಕ್ ಎಚ್ಚರಿಸಿದ ತಕ್ಷಣ ಕಾರ್ಡ್ ನಿಷ್ಕ್ರಿಯಗೊಳಿಸಲಾಯಿತು. ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೈಬರ್ ವಂಚಕರು ಡಾರ್ಕ್ ವೆಬ್ ಅಥವಾ ಸ್ಪೈವೇರ್ ಮೂಲಕ ಡೇಟಾ ಕದ್ದಿರಬಹುದು ಎಂದು ಶಂಕಿಸಲಾಗಿದೆ.

Source: Zee Kannada News

Read the live feed on ZapIndies