ತುಮಕೂರಿನ ಕಾಲ್ಟೆಕ್ಸ್ ಸರ್ಕಲ್ ಬಳಿಯ ವಿಶ್ವಾಸ್ ಜ್ಯುವೆಲರಿ ಅಂಗಡಿಯಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಯಾವುದೇ ಕನ್ನ ಕಾಣದೆ ನಡೆದ ಈ ಕಳ್ಳತನದ ಹಿಂದೆ ಇಲಿಯ ಕೃತ್ಯ ಇರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ. ಇಲಿಯು 10 ಉಂಗುರಗಳು ಮತ್ತು 3 ಸರಗಳನ್ನು ತನ್ನ ಬಿಲದೊಳಗೆ ಸಾಗಿಸಿಡುವುದು ಕಂಡುಬಂದಿದೆ. ಸಿಬ್ಬಂದಿ ಬಿಲವನ್ನು ತೋಡಿ ಎಲ್ಲಾ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನಲ್ಲಿ ಇಲಿಯೇ ವಜ್ರ ಕಳ್ಳ!
Source: Zee Kannada News
Read the live feed on ZapIndies