ನೂತನ ಸಚಿವರು ಸಾಲು ಸಾಲಾಗಿ ಸಿದ್ದರಾಮಯ್ಯ ಭೇಟಿ

ನೂತನ ಸಚಿವರು ಸಾಲು ಸಾಲಾಗಿ ಸಿದ್ದರಾಮಯ್ಯ ಭೇಟಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಂತ್ರಿಗಳಾಗಿ ಆಯ್ಕೆಯಾದ ನೂತನ ಸಚಿವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಲು ಸಾಲಾಗಿ ಭೇಟಿ ಮಾಡಿದ್ದಾರೆ. ಕಲಬುರಗಿಯ ಅಜಯ್ ಸಿಂಗ್, ಚೆಳ್ಳೆಕೆರೆಯ ಟಿ.ರಘುಮೂರ್ತಿ, ಪುಟ್ಟರಂಗಶೆಟ್ಟಿ, ನರೇಂದ್ರ ಸ್ವಾಮಿ, ಮಧು ಬಂಗಾರಪ್ಪ, ಕೆ.ಎಸ್.ಬಸವಂತಪ್ಪ, ಚಲುವರಾಯಸ್ವಾಮಿ, ಶಿವಲಿಂಗೇಗೌಡ, ರಿಜ್ವಾನ್ ಅರ್ಷದ್ ಹಾಗೂ ಸಂತೋಷ್ ಲಾಡ್ ಸೇರಿದಂತೆ ಹಲವರು ಹೂಗುಚ್ಛ ನೀಡಿ ಸಂತಸ ಹಂಚಿಕೊಂಡರು. ಸಿದ್ದರಾಮಯ್ಯ ಅವರು ಎಲ್ಲರಿಗೂ ಶುಭಹಾರೈಸಿದ್ದಾರೆ.

Source: Zee Kannada News

Read the live feed on ZapIndies