ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಾಲ್ಮೀಕಿ ನಿಗಮ ಹಗರಣದ ಆರೋಪಿ ಬಿ. ನಾಗೇಂದ್ರ ಅವರಿಗೆ ಮತ್ತೆ ಮಂತ್ರಿಗಿರಿ ನೀಡಿರುವುದು, ಮಹಿಳೆಯರಿಗೆ ಒಂದೇ ಸ್ಥಾನ ನೀಡದಿರುವುದು ಮತ್ತು ‘ಪೇಮೆಂಟ್’ ಪಡೆದವರಿಗೆ ಸಚಿವ ಸ್ಥಾನ ನೀಡಿರುವ ಆರೋಪಗಳನ್ನು ಬಿಜೆಪಿ ಮುಂದಿಟ್ಟಿದೆ. ಸಾಂವಿಧಾನಿಕ ಹುದ್ದೆಗಳ ಅಭ್ಯರ್ಥಿ ಪಟ್ಟಿಯನ್ನು ಪಕ್ಷದ ಲೆಟರ್ ಹೆಡ್ನಲ್ಲಿ ಪ್ರಕಟಿಸಿದ್ದನ್ನು ಪ್ರಜಾಪ್ರಭುತ್ವಕ್ಕೆ ಅವಮಾನ ಎಂದು ಖಂಡಿಸಿದೆ. 8 ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದೂ ಆರೋಪಿಸಿದೆ.
ಸಚಿವ ಸಂಪುಟ ವಿಸ್ತರಣೆ: ಭ್ರಷ್ಟರಿಗೆ ಬಹುಮಾನ, ಮಹಿಳೆಯರಿಗೆ ನಿರ್ಲಕ್ಷ್ಯ ಎಂದ ಬಿಜೆಪಿ
Source: Zee Kannada News
Read the live feed on ZapIndies