ಮೆಟ್ರೋ ಹಸಿರು ಮಾರ್ಗದಲ್ಲಿ ನಾಳೆ ರೈಲು ಸಂಚಾರದಲ್ಲಿ ವ್ಯತ್ಯಯ

ಮೆಟ್ರೋ ಹಸಿರು ಮಾರ್ಗದಲ್ಲಿ ನಾಳೆ ರೈಲು ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೆಟ್ರೋ ಹಸಿರು ಮಾರ್ಗದಲ್ಲಿ (ಮಾದಾವರ-ರೇಷ್ಮೆ ಸಂಸ್ಥೆ) ಆಗಸ್ಟ್ 7ರ ಶುಕ್ರವಾರ ರಾತ್ರಿ ರೈಲು ಸಂಚಾರದಲ್ಲಿ ಬದಲಾವಣೆಯಾಗಲಿದೆ. ಹೊಸ CRRC ರೈಲುಗಳ ಸೇರ್ಪಡೆ ಹಿನ್ನೆಲೆಯಲ್ಲಿ BMRCL ಮತ್ತು CMRS ಅಧಿಕಾರಿಗಳ ತಂಡ ತಾಂತ್ರಿಕ ತಪಾಸಣೆ ನಡೆಸುವುದರಿಂದ, ಯಶವಂತಪುರದಿಂದ ಮಾದಾವರ ಮಾರ್ಗದಲ್ಲಿ ರೈಲುಗಳು 10 ನಿಮಿಷಗಳ ಬದಲಿಗೆ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಮಾದಾವರದಿಂದ ರೇಷ್ಮೆ ಸಂಸ್ಥೆ ಮಾರ್ಗದಲ್ಲಿ ಸೇವೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

Source: Zee Kannada News

Read the live feed on ZapIndies