ಮಂಡ್ಯದ ಐತಿಹಾಸಿಕ ಮೈಶುಗರ್ ಶಾಲೆ ಆವರಣಕ್ಕೆ ಕಾರ್ಖಾನೆಯ ಪಿಲ್ಮ್ಯಾನ್ ಕಚೇರಿ ಸ್ಥಳಾಂತರಿಸಲು ಮುಂದಾದ ಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸಿಬ್ಬಂದಿ ಟ್ರ್ಯಾಕ್ಟರ್ ಮೂಲಕ ಪೀಠೋಪಕರಣಗಳನ್ನು ಸ್ಥಳಾಂತರಿಸಲು ಮುಂದಾದಾಗ ಹಳೆಯ ವಿದ್ಯಾರ್ಥಿಗಳು ತಡೆದು ಪ್ರತಿಭಟನೆ ನಡೆಸಿದರು. ಶಾಲೆಯ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದ್ದು, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮೈಶುಗರ್ ಶಾಲೆಗೆ ಕಚೇರಿ ಸ್ಥಳಾಂತರಕ್ಕೆ ಹಳೆಯ ವಿದ್ಯಾರ್ಥಿಗಳ ವಿರೋಧ
Source: Zee Kannada News
Read the live feed on ZapIndies