ಶ್ರೀಲಂಕಾ ಪ್ರವಾಸದ ಅಭ್ಯಾಸ ಪಂದ್ಯದ ಮೊದಲ ದಿನದಾಟದಲ್ಲಿ ಶ್ರೀಲಂಕಾ XI ತಂಡ 8 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿ ಭಾರತದ ಎದುರು ಮೇಲುಗೈ ಸಾಧಿಸಿದೆ. ನಿಶಾನ್ ಮಧುಷ್ಕ (66) ಮತ್ತು ರವಿಂದು ರಸಂತ (71) ಅರ್ಧಶತಕಗಳೊಂದಿಗೆ ಆರಂಭಿಕ ಜೋಡಿ 110 ರನ್ ಸೇರಿಸಿತು. ಭಾರತದ ಪರ ಜಡೇಜಾ, ಕುಲ್ದೀಪ್ ಮತ್ತು ಸುತಾರ್ ತಲಾ ಎರಡು ವಿಕೆಟ್ ಪಡೆದರು.
ಅಭ್ಯಾಸ ಪಂದ್ಯದ ಮೊದಲ ದಿನ ಶ್ರೀಲಂಕಾ XI ಮೇಲುಗೈ
Source: Vishwavani