ಬೆಂಗಳೂರಿನಲ್ಲಿ 'ಪರಮ್ ಕಲ್ಚರ್' ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ 'ಭಜ ಮನ' ಪೂರ್ವ-ಕಛೇರಿ ಗಾಯನ ಕಾರ್ಯಾಗಾರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಡಾ. ವಿದ್ಯಾಭೂಷಣ್ ಮತ್ತು ಅವರ ಪುತ್ರಿ ಮೇಧಾ ಅವರು ನೂರಾರು ಸಂಗೀತಾಸಕ್ತರಿಗೆ ದಾಸರ ಪದಗಳನ್ನು ಕಲಿಸಿದರು. ಆಯ್ಕೆಯಾದ ಅಭ್ಯಾಸಿಗಳು ಆಗಸ್ಟ್ 8ರಂದು ಎನ್ಎಂಕೆಆರ್ವಿ ಕಲಾಕ್ಷೇತ್ರದಲ್ಲಿ ಡಾ. ವಿದ್ಯಾಭೂಷಣ್ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡಿದರು.
ಡಾ. ವಿದ್ಯಾಭೂಷಣ್ ಅವರ 'ಭಜ ಮನ' ಕಾರ್ಯಾಗಾರ ಯಶಸ್ವಿ
Source: Vishwavani