ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಯುವಜನರನ್ನು Gen-Z, Gen-Alpha ಎಂದು ಕರೆಯುವ ಪಾಶ್ಚಿಮಾತ್ಯ ಪದ್ಧತಿಯನ್ನು ವಿರೋಧಿಸಿ, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ 'ಮಗ-ಮಗಳು' ಎಂದು ಸಂಬೋಧಿಸಬೇಕು ಎಂದು ಹೇಳಿದ್ದಾರೆ. 80ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಅವರು ಯುವಕರ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ ರಚಿಸುವುದಾಗಿ ಘೋಷಿಸಿದರು. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಮೂಲಸೌಕರ್ಯಕ್ಕೆ ₹1.5 ಲಕ್ಷ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಯುವಕರನ್ನು 'ಮಗ-ಮಗಳು' ಎಂದು ಕರೆಯಿರಿ: ಅಸ್ಸಾಂ ಸಿಎಂ
Source: Hosadigantha