ಪಂಜಾಬ್ನ ಹೋಶಿಯಾರ್ಪುರದಲ್ಲಿ BSF ಯೋಧ ಅಮರ್ಜಿತ್ ಸಿಂಗ್ ತನ್ನ ಪತ್ನಿ ರಾಮಾಳನ್ನು ಹತ್ಯೆ ಮಾಡಿ, ಆಕೆ ಮಹಡಿಯಿಂದ ಬಿದ್ದು ಸತ್ತಂತೆ ನಟಿಸಲು ಯತ್ನಿಸಿದ್ದಾನೆ. ರಾಮಾ ಕುಟುಂಬದ ದೂರಿನಂತೆ ಆಗಸ್ಟ್ 13ರ ರಾತ್ರಿ ರಜೆ ಮೇಲೆ ಮನೆಗೆ ಬಂದ ಅಮರ್ಜಿತ್ ಹಲ್ಲೆ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ. ಪೊಲೀಸರು ಅಮರ್ಜಿತ್ ಸಿಂಗ್, ಚಿಕ್ಕಪ್ಪ ಕುಲದೀಪ್ ಕುಕಿ ಮತ್ತು ಚಿಕ್ಕಮ್ಮ ಸೋನಿಯಾ ವಿರುದ್ಧ ಪ್ರಕರಣ ದಾಖಲಿಸಿ, ಅಮರ್ಜಿತ್ನನ್ನು ಬಂಧಿಸಿದ್ದಾರೆ.
ಪತ್ನಿ ಹತ್ಯೆ ಪ್ರಕರಣ: BSF ಯೋಧ ಬಂಧನ
Source: Public TV