ಚಾಮರಾಜನಗರದ ಹನೂರು ಅರಣ್ಯದಲ್ಲಿ ಆಗಸ್ಟ್ 14ರಂದು ನಡೆದ ತ್ರಿಬಲ್ ಶೂಟೌಟ್ ಪ್ರಕರಣ ವಿಧಾನಪರಿಷತ್ನಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಒಂದೇ ಕುಟುಂಬದ ಮೂವರ ಸಾವಿಗೆ ಸರ್ಕಾರಿ ಕೊಲೆ ಎಂದು ಆರೋಪಿಸಿರುವ ವಿಪಕ್ಷಗಳು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿವೆ. ಸಚಿವ ರಾಮಲಿಂಗಾರೆಡ್ಡಿ ಆತ್ಮರಕ್ಷಣೆಗೆ ಗುಂಡು ಹಾರಿಸಲಾಗಿದೆ ಎಂದು ಸಮರ್ಥನೆ ನೀಡಿದರೂ, ವಿಪಕ್ಷಗಳು ಸದನದಲ್ಲಿ ಧರಣಿ ನಡೆಸಿದವು.
ಚಾಮರಾಜನಗರ ಶೂಟೌಟ್: ನ್ಯಾಯಾಂಗ ತನಿಖೆಗೆ ವಿಪಕ್ಷ ಆಗ್ರಹ
Source: Zee Kannada News