ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕದ ಹೊರೆ ಗ್ರಾಹಕರಿಗೆ ಬೀಳದಂತೆ ಕೇಂದ್ರ ಹಣಕಾಸು ಸಚಿವಾಲಯ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸುತ್ತಿದೆ. ಅಕ್ಟೋಬರ್ 15ರಿಂದ 2,000 ರೂಪಾಯಿಗಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳಿಗೆ ಶೇಕಡಾ 0.4ರಷ್ಟು ಶುಲ್ಕ ಅನ್ವಯವಾಗಲಿದ್ದು, ವ್ಯಾಪಾರಿಗಳು ಪಾವತಿಸಬೇಕು; ಗ್ರಾಹಕರಿಗೆ ವರ್ಗಾಯಿಸುವಂತಿಲ್ಲ. ವ್ಯಕ್ತಿಗಳ ನಡುವಿನ ಪಾವತಿ ಮತ್ತು ದೈನಂದಿನ ವ್ಯಾಪಾರಿ ವಹಿವಾಟುಗಳು ಉಚಿತವಾಗಿ ಮುಂದುವರಿಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯುಪಿಐ ಎಂಡಿಆರ್ ಶುಲ್ಕ: ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ
Source: Vishwavani