ವಿದೇಶಾಂಗ ವ್ಯವಹಾರಗಳ ಸಚಿವಾಲಯವು 15 ವರ್ಷದೊಳಗಿನ ಮಕ್ಕಳಿಗೆ ನೀಡುವ ಪಾಸ್‌ಪೋರ್ಟ್‌ಗಳ ಮಾನ್ಯತೆಯನ್ನು ಪರಿಷ್ಕರಿಸಿದೆ. ಹೊಸ ನಿಯಮದ ಪ್ರಕಾರ, ಪಾಸ್‌ಪೋರ್ಟ್ ನೀಡಿದ ದಿನದಿಂದ ಐದು ವರ್ಷಗಳವರೆಗೆ ಅಥವಾ ಮಗುವಿಗೆ 18 ವರ್ಷ ತುಂಬುವವರೆಗೆ (ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ) ಮಾನ್ಯವಾಗಿರುತ್ತದೆ. ಸೆಪ್ಟೆಂಬರ್ 17 ರಂದು ಭಾರತದ ಗೆಜೆಟ್‌ನಲ್ಲಿ ಪ್ರಕಟವಾದ ತಿದ್ದುಪಡಿ ನಿಯಮಗಳ ಮೂಲಕ ಈ ಬದಲಾವಣೆ ಜಾರಿಗೆ ಬಂದಿದೆ.
15 ವರ್ಷದೊಳಗಿನ ಮಕ್ಕಳ ಪಾಸ್‌ಪೋರ್ಟ್ ನಿಯಮ ಬದಲಾವಣೆ
Source: Kannada Dunia