ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿ ಮತ್ತು ಕೇಂದ್ರದ ಕರಡು ಅಧಿಸೂಚನೆ ವಿರೋಧಿಸಿ ಸೋಮವಾರದಿಂದ ಮೂರು ದಿನಗಳ ವಿಧಾನಮಂಡಲ ವಿಶೇಷ ಅಧಿವೇಶನ ಆರಂಭವಾಗಲಿದೆ. ಸೆಪ್ಟೆಂಬರ್ 27ರೊಳಗೆ ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಬೇಕಿರುವುದರಿಂದ ಸರ್ಕಾರ ಅಧಿಕೃತ ನಿರ್ಣಯ ಅಂಗೀಕರಿಸುವ ಸಾಧ್ಯತೆಯಿದೆ. ಪ್ರಶ್ನೋತ್ತರ, ಗಮನಸೆಳೆಯುವ ಸೂಚನೆಗಳಿಗೆ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಅಧಿವೇಶನ ವಿಸ್ತರಣೆ ಸೇರಿ ವಿಪಕ್ಷಗಳ ಒತ್ತಾಯದಿಂದ ವಾಕ್ಸಮರ ಏರ್ಪಟ್ಟಿದೆ.
ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯಕ್ಕೆ ಸರ್ಕಾರ ಸಜ್ಜು
Source: Public TV