ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಅಕ್ಟೋಬರ್ 20ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಒಪ್ಪಂದದಡಿ ಭಾರತದ ಶೇ.100ರಷ್ಟು ರಫ್ತು ಉತ್ಪನ್ನಗಳಿಗೆ ನ್ಯೂಜಿಲೆಂಡ್‌ನಲ್ಲಿ ಸುಂಕಮುಕ್ತ ಪ್ರವೇಶ ದೊರೆಯಲಿದ್ದು, ನ್ಯೂಜಿಲೆಂಡ್ ಮುಂದಿನ 15 ವರ್ಷಗಳಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಭಾರತೀಯ ವೃತ್ತಿಪರರಿಗೆ ಮತ್ತು ವಿದ್ಯಾರ್ಥಿಗಳಿಗೆ ಹೊಸ ವೀಸಾ ಅವಕಾಶಗಳೂ ಸಿಗಲಿವೆ.
ಭಾರತ–ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ ಅಕ್ಟೋಬರ್ 20ರಿಂದ ಜಾರಿ
Source: Vishwavani